Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಗ್ರಸೇನಾ ತಂದೆ-ಮಗ,ನಂಬಿಕೆ-ಅಪನಂಬಿಕೆಗಳ ಸುತ್ತ ನಡೆವ ಕಥೆ - - 3/5 ***
Posted date: 24 Sat, Jun 2023 12:08:04 AM
ಸತ್ಯ ನಿತ್ಯ
 
ಚಿತ್ರ : ಅಗ್ರಸೇನಾ
ನಿರ್ಮಾಣ : ಶ್ರೀಮತಿ ಮಮತಾ ಜಯರಾಮರೆಡ್ಡಿ, ಜಯರಾಮರೆಡ್ಡಿ 
ನಿರ್ದೇಶನ ; ಮುರುಗೇಶ್ ಕಣ್ಣಪ್ಪ 
ಛಾಯಾಗ್ರಹಣ ; ಆರ್.ಪಿ. ರೆಡ್ಡಿ 
ಸಂಗೀತ : ಎಂ.ಎಸ್. ತ್ಯಾಗರಾಜ್ 
ಕಲಾವಿದರು : ಅಗಸ್ತ್ಯ ಬೆಳಗೆರೆ, ಅಮರ್ ವಿರಾಜ್, ರಾಮಕೃಷ್ಣ, ರಚನಾ ದಶರಥ್, ಭಾರತಿ ಹೆಗಡೆ , ತನಿಶಾ ರೆಡ್ಡಿ  ಹಾಗೂ ಇತರರು.  
 
ಹಳ್ಳಿಗಳಲ್ಲಿ ನಂಬಿಕೆಯ ಮೇಲೇ ಜೀನವ ನಡೆಯುತ್ತದೆ. ಆದರೆ ಪಟ್ಟಣಗಳಲ್ಲಿ ನಂಬಿಸಿ ದ್ರೋಹ ಮಾಡುವವರೇ ಹೆಚ್ಚು. ಈ ಕಾನ್ಸೆಪ್ಟ್ ಇಟ್ಟುಕೊಂಡು  ಈವಾರ ತೆರೆಕಂಡಿರುವ ಚಿತ್ರ  ಅಗ್ರಸೇನಾ. ತಂದೆ ಮಗನ ನಡುವಿನ  ಬಾಂಧವ್ಯದ ಕಥೆಯನ್ನು ಮನಮಿಡಿಯುವ ಕಥಾಹಂದರದೊಂದಿಗೆ ಹೇಳುವ ಪ್ರಯತ್ನವನ್ನು ನಿರ್ದೇಶಕ ಮುರುಗೇಶ್ ಕಣ್ಣಪ್ಪ ಅವರು ಮಾಡಿದ್ದಾರೆ. 
 
ತಂದೆಯ ಮೇಲೆ  ಪ್ರೀತಿ, ಗೌರವ ಇಟ್ಟುಕೊಂಡ  ಮಕ್ಕಳ ಜೊತೆ, ಪೋಷಕರೂ ನೋಡಬೇಕಾದಂಥ  ಚಿತ್ರವಿದು, ಆರಂಭದಲ್ಲಿ ಹಳ್ಳಿ ಹಾಗೂ ನಗರ ಹೀಗೆ ಎರಡು ಟ್ರ‍್ಯಾಕ್‌ಗಳಲ್ಲಿ ನಡೆಯುವ ಕಥೆ ಮುಂದೆ ಒಂದೇ ಟ್ರ್ಯಾಕ್ ಆಗುತ್ತದೆ.  ಅದು ರಾಮದೇವಪುರ ಎಂಬ ಪುಟ್ಟ ಗ್ರಾಮ,  ಆ ಹಳ್ಳಿಗೆ ದೊಡ್ಡ ಮನುಷ್ಯ  ಸೂರಪ್ಪ(ರಾಮಕೃಷ್ಣ), ಸೂರಪ್ಪ  ಎಂದರೆ  ಆ ಹಳ್ಳಿಯ ಜನ ಭಯ ಭಕ್ತಿ  ಗೌರವ.
ಇಟ್ಟುಕೊಂಡಿರುತ್ತಾರೆ. ಸೂರಪ್ಪ ಕೂಡ ಹಳ್ಳಿಯ ಜನರ ಕಷ್ಟ ಸುಖಗಳಲ್ಲೂ  ಭಾಗಿಯಾಗುತ್ತ ಮಕ್ಕಳ ಹಾಗೆ ನೋಡಿಕೊಂಡಿರಯತ್ತಾನೆ. ಬಹಳ ಹಿಂದೆ ನಡೆದ ಒಂದೆರಡು ಅಹಿತಕರ  ಘಟನೆಗಳಿಂದಾಗಿ  ಸೂರಪ್ಪನಿಗೆ  ಪಟ್ಟಣದವರ ಮೇಲೆ ನಂಬಿಕೆ ಹೊರಟುಹೋಗಿರುತ್ತದೆ.  ಅಪ್ಪನಂತೆ  ಸೂರಪ್ಪನ ಮಗ ಆದಿಶೇಷನೂ(ಅಗಸ್ತ್ಯ ಬೆಳಗೆರೆ) ಸಹ ಹಳ್ಳಿಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ತಂದೆಯ ಹಾದಿಯನ್ನೇ ಮುಂದುವರೆಸಿಕೊಂಡು ಬಂದಿರುತ್ತಾನೆ. 
 
ಯಾವುದೇ ಕಾರಣಕ್ಕೂ  ನೀನು ಪಟ್ಟಣಕ್ಕೆ ಕಾಲಿಡಬೇಡ, ಹಳ್ಳಿಯವರನ್ನೂ ಸಿಟಿಗೆ ಹೋಗಲು ಬಿಡಬೇಡ ಎಂದು  ಸೂರಪ್ಪ ಮಗನಿಂದ  ಭಾಷೆ ತೆಗೆದುಕೊಂಡಿರುತ್ತಾನೆ. ಮುಂದೆ ವಯಸ್ಸಾದಂತೆ ಸೂರಪ್ಪನನ್ನು ಅಸ್ತಮಾ ಆವರಿಸಿಕೊಂಡು ಆತ ಹೈರಾಣಾಗುವಂತೆ ಮಾಡುತ್ತದೆ, ಅಸ್ತಮಾದಿಂದ ಬಳಲುತ್ತಿದ್ದ ತಂದೆಯನ್ನು ಉಳಿಸಿಕೊಳ್ಳಲು ತಂದೆಯನ್ನು ಸಿಟಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಆದಿಶೇಷನಿಗೆ ಎದುರಾಗುತ್ತದೆ, ಆದರೆ  ತಂದೆಗೆ ಮಾತು ಕೊಟ್ಟಂತೆ  ತಾನು ಪಟ್ಟಣಕ್ಕೆ ಹೋಗುವ ಹಾಗಿಲ್ಲ, ಆಗ ಮನೆಯ ಗುಮಾಸ್ತ ನೀಡಿದ ಸಲಹೆಯ ಮೇರೆಗೆ  ಪಟ್ಟಣದಲ್ಲಿದ್ದ  ಅಮರ್( ಅಮರ್ ವಿರಾಜ್)ನನ್ನು ಕರೆಸಿಕೊಂಡು, ತಂದೆಯನ್ನು ಪಟ್ಟಣಕ್ಕೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು  ವಹಿಸಿ,  ಅಮರ್ ಜೊತೆ ತನ್ನ ತಂದೆಯನ್ನು ಕಳಿಸಿಕೊಡುತ್ತಾನೆ. ಆದರೆ ಜನರಿಗೆ ವಂಚಿಸುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ ಅಮರ್ ಈ ವಿಷಯದಲ್ಲೂ  ಹಾಗೇ ನಡೆದುಕೊಳ್ತಾನೆ. ಆದಿಶೇಷ ತಂದೆಯ ಚಿಕಿತ್ಸೆಗೆಂದು ಕೊಟ್ಟ ಲಕ್ಷಾಂತರ ಹಣದಲ್ಲಿ ಪ್ರೇಯಿಸಿಗೆ ದುಬಾರಿ ಬಟ್ಟೆ ಕೊಡಿಸಿ, ಹಾಗೂ ಗೆಳೆಯರೊಂದಿಗೆ ಬಾರ್ ಪಬ್ ಸುತ್ತಾಡಿ ಬೇಕಾ ಬಿಟ್ಟಿ ಖರ್ಚು ಮಾಡುತ್ತಾನೆ.  ಆತನ ಪ್ರೇಯಸಿ ರಿಶಿಕಾ (ರಚನಾ ದಶರಥ್)ಗೆ  ಅಮರ್ ಮಾಡುತ್ತಿರುವ ಕೆಲಸ  ಗೊತ್ತಿರುವುದಿಲ್ಲ, ಒಮ್ಮೆ ಈತನ ಮೋಸ ತಿಳಿದು  ಛೀಮಾರಿ ಹಾಕುತ್ತಾಳೆ,  ಇದೇ ಸಂದರ್ಭದಲ್ಲಿ  ಸಾಯುವ ಸ್ಥಿತಿಯಲ್ಲಿದ್ದ  ಸೂರಪ್ಪನನ್ನು ಆಸ್ಪತ್ರೆಯಿಂದ ಯಾರೋ ಕಿಡ್ನಾಪ್ ಮಾಡಿಬಿಡುತ್ತಾರೆ. ಅವರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್  ಸೂರಪ್ಪ  ಸತ್ತುಹೋಗಿದ್ದಾನೆಂದು ಸುಳ್ಳು ಹೇಳಿ ಮುಖ ಕಾಣದಂತೆ ಪ್ಯಾಕ್ ಮಾಡಿದ ಶವವನ್ನು ಅಮರ್ ಜತೆ ಕಳಿಸಿಕೊಡುತ್ತಾರೆ,  ಇತ್ತ ತಂದೆ ಆರೋಗ್ಯವಾಗಿ ಮರಳುತ್ತಾರೆಂದು  ಎದುರು ನೋಡುತ್ತಿದ್ದ ಆದಿಶೇಷನಿಗೆ  ಯಾರದೋ ಶವವನ್ನು  ತಂದು ತೋರಿಸಿದ  ಅಮರ್ ಮೇಲೆ ಕೋಪ ಉಕ್ಕಿ ಹರಿಯುತ್ತದೆ, ಹಿಗ್ಗಾ ಮುಗ್ಗ ಥಳಿಸಿಬಿಡುತ್ತಾನೆ.  ತಂದೆಯ ಶವ ಹುಡುಕಿಕೊಂಡು  ಆದಿಶೇಷ ಸಿಟಿಗೆ ಬರುತ್ತಾನೆ,  ತನ್ನ ಜೀವದಂತೆ ಕಾಪಾಡಿಕೊಂಡು ಬಂದಿದ್ದ ತಂದೆಯನ್ನು ಕೊನೆಗೂ ಆದಿಶೇಷ ಹುಡುಕಿದನೇ, ಆತನಿಗೆ  ತಂದೆ ಜೀವಂತವಾಗಿ ಸಿಗುತ್ತಾರಾ,  ಅಷ್ಟಕ್ಕೂ ಸೂರಪ್ಪನನ್ನು ಕಿಡ್ನಾಪ್ ಮಾಡುವಂಥ ದ್ವೇಷ ಯಾರಿಗಿತ್ತು,  ಈ ಎಲ್ಲ  ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಒಮ್ಮೆ ಥೇಟರಿಗೆ ಹೋಗಿ ಅಗ್ರಸೇನಾ ಚಿತ್ರವನ್ನು ವೀಕ್ಷಿಸಿ. ಇಡೀ ಚಿತ್ರದ ಹೈಲೈಟ್ ಎಂದರೆ ಹಿನ್ನೆಲೆ ಸಂಗೀತ, ತ್ಯಾಗರಾಜ್ ಸಂಗೀತದ ಮೂಲಕ  ಚಿತ್ರಕ್ಕೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಫಸ್ಟ ಹಾಫ್ ಸರಾಗವಾಗಿ ಸಾಗುವ ಕಥೆ ಸೆಕೆಂಡ್ ಹಾಫ್  ನಲ್ಲಿ ಸ್ಪಲ್ಪ ಗೊಂದಲ ಎನಿಸುತ್ತದೆ. ಹಾಡುಗಳು ಜೊತೆಗೆ ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿದೆ. ಇಡೀ ಕುಟುಂಬ ಕುಳಿತು ನೋಡುವಂಥ  ಒಂದು ಉತ್ತಮ ಚಿತ್ರ ಎಂದು ಖಂಡಿತ ಹೇಳಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಗ್ರಸೇನಾ ತಂದೆ-ಮಗ,ನಂಬಿಕೆ-ಅಪನಂಬಿಕೆಗಳ ಸುತ್ತ ನಡೆವ ಕಥೆ - - 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.